ಗಂಟೆಯು ಕಾಲದ ಒಂದು ಏಕಮಾನವಾಗಿದ್ದು ಇದನ್ನು ಒಂದು ದಿನದ 1⁄24 ಭಾಗ ಎಂದು ಸಾಂಪ್ರದಾಯಿಕವಾಗಿ ಲೆಕ್ಕಹಾಕಲಾಗಿದೆ. ಪರಿಸ್ಥಿತಿಗಳನ್ನು ಅವಲಂಬಿಸಿ ವೈಜ್ಞಾನಿಕವಾಗಿ 3,599–3,601 ಸೆಕೆಂಡುಗಳಿಗೆ ಸಮ ಎಂದು ಲೆಕ್ಕಹಾಕಲಾಗಿದೆ. ಗಂಟೆಯನ್ನು ಆರಂಭದಲ್ಲಿ ಪ್ರಾಚೀನ ನಿಕಟಪ್ರಾಚ್ಯದಲ್ಲಿ ರಾತ್ರಿ ಅಥವಾ ಹಗಲಿನ ಸಮಯದ 1⁄12 ದ ಚರ ಅಳತೆಯಾಗಿ ಸ್ಥಾಪಿಸಲಾಯಿತು. ಅಂತಹ ನಿರ್ದಿಷ್ಟ ಕಾಲದ, ತಾತ್ಕಾಲಿಕ ಅಥವಾ ಅಸಮವಾದ ಗಂಟೆಗಳು ಋತು ಮತ್ತು ಅಕ್ಷಾಂಶ ಬದಲಾದಂತೆ ಬದಲಾಗುತ್ತಿದ್ದವು. ಅಲ್-ಬಿರುನಿ ಮತ್ತು ಸ್ಯಾಕ್ರೊಬೊಸ್ಕೊನಂತಹ ಮಧ್ಯಯುಗದ ಖಗೋಳಶಾಸ್ತ್ರಜ್ಞರು ತರುವಾಯ ಗಂಟೆಯನ್ನು ೬೦ ನಿಮಿಷಗಳಾಗಿ, ಮತ್ತು ಪ್ರತಿ ನಿಮಿಷವನ್ನು ೬೦ ಸೆಕೆಂಡುಗಳಾಗಿ ವಿಭಜಿಸಿದರು. ಸಮ ಅಥವಾ ಸಮದಿವಾರಾತ್ರಿಯ ಗಂಟೆಗಳನ್ನು ಮಧ್ಯಾಹ್ಯದಿಂದ ಮಧ್ಯಾಹ್ನದವರೆಗೆ ಅಳೆಯಲಾದ ದಿನದ 1⁄24 ಭಾಗವೆಂದು ತೆಗೆದುಕೊಳ್ಳಲಾಗಿತ್ತು; ಈ ಏಕಮಾನದ ಅಪ್ರಧಾನ ಋತು ಸಂಬಂಧಿ ಬದಲಾವಣೆಗಳನ್ನು ಕಟ್ಟಕಡೆಗೆ ಗಂಟೆಯನ್ನು ಸರಾಸರಿ ಸೌರದಿನದ 1⁄24 ಭಾಗವೆಂದು ಮಾಡಿ ನಯಗೊಳಿಸಲಾಯಿತು. == ಉಲ್ಲೇಖಗಳು ==